ನಮ್ಮ ಶಾಲೆಯಲ್ಲಿ 2016-17
ನೇ ಸಾಲಿನ ಶಾಲಾ ಸಂಸತ್ತಿಗೆ ಆನ್‍ಲೈನ್ ಮತದಾನದ ಮೂಲಕ ಚುನಾವಣೆ ನಡೆಸಲಾಯಿತು. ಚುನಾವಣಾ ಪ್ರಕ್ರಿಯೆಯ
ಹಂತಗಳಾದ ನಾಮಪತ್ರ ಸಲ್ಲಿಕೆ, ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂತೆಗೆತ, ಚುನಾವಣಾ ಪ್ರಚಾರ, ಚುನಾವಣೆ
ಹಾಗೂ ಮತೆಣಿಕೆ, ಈ ಎಲ್ಲ ಒಳಗೊಂಡಂತೆ ಶಾಲಾ ಸಂಸತ್ತಿಗೆ ಚುನಾವಣೆಯ ಮೂಲಕ ಮಂತ್ರಿಮಂಡಳವನ್ನು ನೇಮಿಸಲಾಯಿತು.
ಶಾಲೆಯ ಸಮಾಜವಿಜ್ಞಾನ ಶಿಕ್ಷಕರಾದ ವಸಂತಕುಮಾರ ಶ್ಯಾಗೋಟಿ ಅವರು “ ಗೂಗಲ್ ಫಾರ್ಮ್” ಮೂಲಕ ಆನ್‍ಲೈನ್
ಚುನಾವಣೆಯನ್ನು ವ್ಯವಸ್ಥೆಗೊಳಿಸಿದ್ದರು. ಮುಖ್ಯ ಶಿಕ್ಷಕರಾದ ಶ್ರೀ. ಟಿ. ವ್ಹಿ. ನಾಯ್ಕ ರವರು ಚುನಾವಣಾ
ಆಯುಕ್ತರಾಗಿದ್ದರು. ಸಹಶಿಕ್ಷಕರಾದ ಶ್ರೀ ಎಸ್. ಎಸ್. ಮಳ್ಳಿ ಹಾಗೂ ವಸಂತಕುಮಾರ ಶ್ಯಾಗೋಟಿ ಇವರು ಚುನಾವಣಾ
ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ಸಹಶಿಕ್ಷಕರಾದ ಶ್ರೀ ಎಫ್. ಎಮ್ ಹಾಡ್ಕರ್, ಶ್ರೀ ಎಮ್ ಎನ್
ಧಬಾಡಿ, ಶ್ರೀ ಮತಿ ಎಸ್. ಬಿ. ಮೆಕ್ಕೇದ್ ಹಾಗೂ ಟಿ. ಎಸ್. ಆಲೂರು ಅವರು ಮತಗಟ್ಟೆ ಅಧಿಕಾರಿಗಳಾಗಿ
ಕಾರ್ಯ ನಿರ್ವಹಿಸಿದರು. ಸಹಶಿಕ್ಷಕರಾದ ಶ್ರೀ ಜೆ. ಆರ್. ಬೆಲ್ಲದ್ ಅವರು ಆನ್‍ಲೈನ್ ಮತದಾನಕ್ಕೆ ಮಕ್ಕಳಿಗೆ
ಸಹಾಯಕರಾಗಿ ಕಾರ್ಯ ನಿರ್ವಹಿಸಿದರು. ದೈಹಿಕ ಶೀಕ್ಷಕರಾದ
ಬಿ. ವಿ. ಗೌಡರ್ ಅವರು ಚುನಾವಣಾ ವೀಕ್ಷಕರಾಗಿದ್ದರು. (ಆಬ್ಸರ್ವರ್)
ಚುನಾವಣೆಯಲ್ಲಿ
10 ನೇ ತರಗತಿಯ ವಿದ್ಯಾರ್ಥಿ ಕುಮಾರ, ಆನಂದ್. ಬಾಣದ ಪ್ರಧಾನ ಮಂತ್ರಿಯಾಗಿ ಹಾಗೂ 9 ನೇ ತರಗತಿಯ ವಿದ್ಯಾರ್ಥಿ
ಕುಮಾರ, ಸತೀಶ್. ಕತ್ತಿ ಉಪ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ಇತರ ಮಂತ್ರಿಗಳನ್ನು ಒಬ್ಬರೇ ನಾಮಪತ್ರ
ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನೂತನವಾಗಿ ನೇಮಕವಾದ ಎಲ್ಲ ಮಂತ್ರಿಗಳಿಗೆ ಮುಖ್ಯ
ಶಿಕ್ಷಕರಾದ ಶ್ರೀ. ಟಿ. ವ್ಹಿ. ನಾಯ್ಕ ರವರು ಪ್ರಮಾಣವಚನ ಬೋಧಿಸಿದರು.
2016-17 ನೇ ಸಾಲಿನ ನೂತನ ಮಂತ್ರಿಮಂಡಳ ಈ ಕೆಳಗಿನಂತಿದೆ.
2016-17 ನೇ ಸಾಲಿನ ನೂತನ ಮಂತ್ರಿಮಂಡಳ ಈ ಕೆಳಗಿನಂತಿದೆ.
ಕ್ರ ಸಂ
|
ಮಂತ್ರಿಯ ಹೆಸರು
|
ಖಾತೆ
|
ತರಗತಿ
|
1
|
ಆನಂದ್.
ಬಾಣದ
|
ಪ್ರಧಾನ
ಮಂತ್ರಿ
|
10
|
2
|
ಸತೀಶ್.
ಕತ್ತಿ
|
ಉಪ
ಪ್ರಧಾನ ಮಂತ್ರಿ
|
9
|
3
|
ದಾವಲಬಿ.
ರೇವಡಿಗಾರ
|
ವಾರ್ತಾ
ಸಚಿವೆ
|
10
|
4
|
ಈರಮ್ಮ
ಬಾಗಲಿ
|
ಹಣಕಾಸು
ಸಚಿವೆ
|
10
|
5
|
ಭುವನೇಶ್ವರಿ
ಹಲಗತ್ತಿ
|
ಆಹಾರಮತ್ತು
ಶಿಸ್ತು ಸಚಿವೆ
|
10
|
6
|
ವಿಶಾಲಾಕ್ಷಿ
ಮೆಕ್ಕಿಕಾಯಿ
|
ಸಾಂಸ್ಕೃತಿಕ
ಸಚಿವೆ
|
9
|
7
|
ರೇಖಾ
ವಾಸನದ
|
ಕ್ರೀಡಾ
ಸಚಿವೆ
|
9
|
8
|
ಪ್ರಭು
ಹಡಗಲಿ
|
ತೋಟಗಾರಿಕಾ
ಸಚಿವ
|
9
|
9
|
ಭಾಗ್ಯಶ್ರೀ
ಶೇಬಣ್ಣವರ
|
ಆರೋಗ್ಯ
ಮತ್ತು ನೈರ್ಮಲ್ಯ ಸಚಿವೆ
|
8
|
10
|
ಬಸವರಾಜ
ಬಡಿಗೇರ
|
ಪ್ರವಾಸ
ಸಚಿವ
|
8
|
![]() |
| ಮುಖ್ಯ ಶಿಕ್ಷಕರಿಂದ ಮತದಾನದ ಉದ್ಘಾಟನೆ |
![]() |
| ಮತದಾನ |
![]() |
| ಆನ್‍ಲೈನ್ ತದಾನದ ಬಗ್ಗೆ ಮಕ್ಕಳಿಗೆ ತರಬೇತಿ |
![]() |
| ಮತದಾನ ಮಾಡಿದ ಸಂತಸದಲ್ಲಿ ವಿದ್ಯಾರ್ಥಿಗಳು |




No comments:
Post a Comment