ಗ್ರಾಮೀಣ ಭಾಗದ ಎಲ್ಲ ಮಕ್ಕಳಿಗೆ ಶಿಕ್ಷಣ ಸೌಲಭ್ಯ
ಸಿಗುವಂತಾಗಬೇಕು ಹಾಗೂ ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸದಾಶಯದೊಂದಿಗೆ 27-06-1983 ರಂದು ನಮ್ಮ ಹೆಮ್ಮೆಯ ಸರ್ಕಾರಿ ಪ್ರೌಢಶಾಲೆ ಸ್ಥಾಪನೆಯಾಯಿತು.
ಶಾಲೆಯಲ್ಲಿ ದೊರೆಯುವ ಸೌಲಭ್ಯಗಳು ಹಾಗೂ ಇಲ್ಲಿಯವರೆಗೆ ನಮ್ಮ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರ ಶ್ರಮದಿಂದಾಗಿ ಪ್ರತೀ ವರ್ಷ ಎಸ್.ಎಸ್.ಎಲ್.ಸಿ ಯಲ್ಲಿ ಉತ್ತಮ ಫಲಿತಾಂಶವನ್ನು ನೀಡುವುದರ ಜೊತೆಗೆ ನಮ್ಮ ಶಾಲೆಯು ಪಠ್ಯೇತರ ಚಟುವಟಿಕೆಗಳು, ಸಹಪಠ್ಯ ಚಟುವಟಿಕೆಗಳು, ಪ್ರತಿಭಾ ಕಾರಂಜಿ, ಕ್ರೀಡೆ ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿ ಜಿಲ್ಲಾ ಮಟ್ಟ, ರಾಜ್ಯ ಮಟ್ಟಗಳಲ್ಲಿ ಭಾಗವಹಿಸಿ ಉತ್ತಮವಾದ ಸಾಧನೆಯನ್ನು ಸಾಧಿಸುತ್ತಾ ಬಂದಿದೆ.
No comments:
Post a Comment