ವಿಶ್ವ ಪರಿಸರ ದಿನ ಜೂನ್ 5- 2018
ದಿನಾಂಕ 05-6-2018 ರಂದು ಸರ್ಕಾರಿ
ಪ್ರೌಢಶಾಲೆ ಹದಲಿ ಇಲ್ಲಿ ಸುಮಾರು 35ಕ್ಕೂಹೆಚ್ಚು
ಗಿಡಗಳನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು..
ಶಾಲೆಯ ಎಲ್ಲ ಮಕ್ಕಳು, ಶಿಕ್ಷಕರು, ಹಳೆಯ
ವಿದ್ಯಾರ್ಥಿಗಳು ಸೇರಿ ಗಿಡಗಳನ್ನು ನೆಟ್ಟು ಸಂರಕ್ಷಿಸುವ ಸಂಕಲ್ಪ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ವಿವೇಕಾನಂದ ಟ್ರಸ್ಟ್ ನ ಯುವ ಮಿತ್ರರು ಭಾಗವಹಿಸಿ
ಗಿಡಗಳನ್ನು ನೆಡಲು ಬಹಳಷ್ಟು ಗುಂಡಿಗಳನ್ನು ತೋಡಿ ಗಿಡ ನೆಡಲು ಸಹಕಾರ ನೀಡಿದರು. ಯುವಕರು ಪರಿಸರ
ಪ್ರಜ್ಞೆ ಹೊಂದಿ ಗಿಡ ನೆಡಲು ಮುಂದೆ ಬಂದಿದ್ದುನಿಜಕ್ಕೂ ಖುಷಿಯ ಸಂಗತಿ....
ಗಿಡ ನೆಟ್ಟ ಮೇಲೆ ಮುಖ್ಯ ಶಿಕ್ಷಕರ ಅಧ್ಯಕ್ಷತೆಯಲ್ಲಿ ವೇದಿಕೆ ಕಾರ್ಯಕ್ರಮ
ನಡೆಯಿತು,
ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು, ವಿವೇಕಾನಂದ ಟ್ರಸ್ಟ್ ನ ಸದಸ್ಯರು ಭಾಗವಹಿಸಿದ್ದರು.
ಆಂಗ್ಲಭಾಷಾ ಶಿಕ್ಷಕರಾದ ಶ್ರೀ. ಎಮ್ ಎನ್ ದಬಾಡಿ ಯವರು ನಿರೂಪಿಸಿದರು, ದೈಹಿಕ
ಶಿಕ್ಷಕರಾದ ಶ್ರೀ ಬಿ. ವಿ. ಗೌಡರ ಅವರು ಸ್ವಾಗತಿಸಿದರು,ವಿಜ್ಞಾನ
ಶಿಕ್ಷಕರಾದ ಶ್ರೀ.
ಜೆ.ಆರ್.ಬೆಲ್ಲದ ಅವರು ಪ್ರಾಸ್ತಾವಿಕ ಮಾತುಗಳಲ್ಲಿ ಪರಿಸರ ಮಾಲಿನ್ಯ ಪರಿಸರ ಸಂರಕ್ಷಣೆ ನಮ್ಮ
ಕರ್ತವ್ಯ ಎಂದು ತಿಳಿಸಿದರು.
ಸಮಾಜವಿಜ್ಞಾನ ಶಿಕ್ಷಕರಾದ ವಸಂತಕುಮಾರ ಶ್ಯಾಗೋಟಿ ಯವರು ಮಾತನಾಡಿ ವಿಶ್ವ ಪರಿಸರ
ದಿನದ ಇತಿಹಾಸವನ್ನು ಹಾಗೂ ಈ ವರ್ಷದ ಧ್ಯೇಯವಾದ ಪ್ಲಾಸ್ಟಿಕ್ ಮಾಲಿನ್ಯ ನಿಷೇಧದ ಕುರಿತು
ತಿಳಿಸಿದರು. ವಿವೇಕಾನಂದ ಟ್ರಸ್ಟ್ ಪರವಾಗಿ ನಾಗರಾಜ ವಿಠ್ಠಪ್ಪನವರ ಮಾತನಾಡಿ ವಿವೇಕಾನಂದ ಟ್ರಷ್ಟರಚನೆಯ
ಉದ್ದೇಶ,
ಅದರ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿ, ಗಿಡಗಳನ್ನು
ಬೆಳೆಸುವ ಹಾಗೂ ಊರನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ನಿಟ್ಟಿನಲ್ಲಿ ನಮ್ಮ ತಂಡ ಕೆಲಸ
ಮಾಡುವುದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯ ಶಿಕ್ಷಕರಾದ ಶ್ರೀ
ಟಿ.ವಿ.ನಾಯ್ಕ. ಅವರು ಮಾತನಾಡಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ತಿಳಿಸಿದರು. ಹಿಂದಿ
ಶಿಕ್ಷಕರಾದ ಶ್ರೀ ಎಲ್. ಎನ್. ದೊಡಮನಿ ಅವರು ವಂದಿಸಿದರು.









No comments:
Post a Comment