ಸರ್ಕಾರಿ ಪ್ರೌಢಶಾಲೆ ಹದಲಿ, ಶಾಲೆಯಲ್ಲಿ
ಅಂತರಾಷ್ಟ್ರೀಯ ಯೋಗ ದಿನವನ್ನು ವಿಶಿಷ್ಠವವಾಗಿ ಆಚರಿಸಲಾಯಿತು.
ಶಿರೋಳ ಗ್ರಾಮದ ಯೋಗ ಮಹರ್ಷಿ ಎಂದೇ ಪ್ರಖ್ಯಾತರಾಗಿದ್ದ
ಶ್ರೀ ರುದ್ರಪ್ಪ ಕೊಣ್ಣೂರ ಅವರು ತಮ್ಮ ಗರಡಿಯಲ್ಲಿ ತಯಾರಾದ, ಭಾವೀ ಯೋಗ ತರಬೇತುದಾರರಾಗುವ
ಮಕ್ಕಳು ಯೋಗ ಪ್ರಾತ್ಯಕ್ಷಿಕೆ ನೀಡಿದರು....
ಶ್ರಿ ಟಿ.
ವಿ. ನಾಯ್ಕ. ಮುಖ್ಯ ಶಿಕ್ಷಕರು ಅದ್ಯಕ್ಷತೆ ವಹಿಸಿದ್ದರು, ಶ್ರೀ ಬಿ.ವಿ.ಗೌಡರ್, ದೈ.ಶಿ.
ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ.
ವಿನಾಯಕ. ಶಾಲದಾರ. ಯೋಗದ ಇತಿಹಾಸ, ಮಹತ್ವದ ಬಗ್ಗೆ ತಿಳಿಸಿ ಆರೋಗ್ಯ ಹಾಗೂ ಸದೃಢ ಮನಸ್ಸಿಗೆ ಯೋಗ
ಅಗತ್ಯ ಎಂದು ಹೇಳಿದರು.
ಶ್ರೀ ಎಮ್. ಎನ್. ದಬಾಡಿ. ಇವರು ಯೋಗದ ಅಗತ್ಯತೆ
ಹಾಗೂ ಯೋಗ ಶ್ಲೋಕಗಳನ್ನು ತಿಳಿಸಿದರು.
ಶ್ರೀ ರುದ್ರಪ್ಪ
ಕೊಣ್ಣೂರ ಅವರಿಗೆ ಶಾಲೆಯ ವತಿಯಿಂದ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಮುಖ್ಯ ಶಿಕ್ಷಕರಾದ ಶ್ರೀ ಟಿ. ವಿ. ನಾಯ್ಕ
ಅದ್ಯಕ್ಷೀಯ ನುಡಿಗಳನ್ನಾಡಿದರು. ಗ್ರಾಮ ಪಂಚಾಯತಿ ಸದಸ್ಯರಾದ ಯಲ್ಲಪ್ಪಗೌಡ ಬನಹಟ್ಟಿ ಇವರು ಅತಿಥಿಗಳಾಗಿ
ಆಗಮಿಸಿದ್ದರು.
ಶ್ರೀಮತಿ ಎಸ್. ಬಿ. ಮೆಕ್ಕೇದ ಅವರು ನಿರೂಪಿಸಿದರು,
ಶ್ರೀಮತಿ ವಿ. ಎಲ್. ಹಿರೇಕೆರೂರ ಸ್ವಾಗತಿಸಿದರು.
ವಿ. ಎಸ್. ಶ್ಯಾಗೋಟಿ ವಂದಿಸಿದರು...
ಶಾಲೆಯ ಎಲ್ಲ ಶಿಕ್ಷಕರು ಹಾಗೂ ಸಿಬ್ಬಂಧಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಯೋಗ ಪ್ರಾತ್ಯಕ್ಷಿಕೆಯ ಪೋಟೋಗಳು....












No comments:
Post a Comment